ಕರ್ನಾಟಕ ರಾಜ್ಯದಲ್ಲಿ ತಿಗಳ (ವಹಿಕುಲ) ಜನಾಂಗವು ಸುಮಾರು 30 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ವಾಸವಾಗಿರುತ್ತಾರೆ. ಈ ಜನಾಂಗವು ಪ್ರತೀವರ್ಷ ಸುಮಾರು 180 ಸ್ಥಳಗಳಲ್ಲಿ ಕರಗ ಮಹೋತ್ಸವವನ್ನು ಆಚರಿಸುತ್ತಾ ಹಿಂದುತ್ವವನ್ನು ಕರ್ನಾಟಕ ರಾಜ್ಯದಲ್ಲಿ ಬೆಳೆಸಿ ಉಳಿಸಿಕೊಂಡಿರುತ್ತಾರೆ.
2023 ರ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದ ಹಿರಿಯ ಮುಖಂಡರುಗಳ ಆದೇಶ ಮತ್ತು ಆಶೀರ್ವಾದದ ಮೇರೆಗೆ ಶ್ರೀ ಹೂಡಿ ವಿಜಯ್ ಕುಮಾರ್ ರವರನ್ನು ಮಾಲೂರು ಕ್ಷೇತ್ರಕ್ಕೆ ಎಮ್.ಎಲ್.ಎ ಉಮೇದುದಾರರಾಗಿ ಸ್ಪರ್ದಿಸಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 4 ವರ್ಷಗಳ ಕಾಲ ಹೂಡಿ ವಿಜಯ್ ಕುಮಾರ್ ರವರು ಮಾಲೂರು ಕ್ಷೇತ್ರದಲ್ಲಿ ಬಿ.ಜೆ.ಪಿ ಅಭ್ಯರ್ಥಿಯಾಗಿ ಬಿಂಬಿಸಿ ಕೆಲಸ ಮಾಡಿರುತ್ತಾರೆ.
ಆದರೆ ಚಿಕ್ಕಬಳ್ಳಾಪುರದ ಹಾಲಿ ಬಿ.ಜೆ.ಪಿ, ಎಮ್.ಪಿ ಅಭ್ಯರ್ಥಿಯಾದ ಡಾ|| ಕೆ. ಸುಧಾಕರ್ ರವರು ಹೂಡಿ ವಿಜಯ್ ಕುಮಾರ್ ರವರಿಗೆ ನೀಡಬೇಕಾಗಿದ್ದ ಎಮ್.ಎಲ್.ಎ ಅಭ್ಯರ್ಥಿಯ ಸ್ಥಾನವನ್ನು ಮಂಜುನಾಥ್ ಗೌಡ ಎಂಬುವವರಿಗೆ ಕೊಡಿಸುವುದರ ಮೂಲಕ ತಿಗಳ (ವಕುಲ) ಜನಾಂಗಕ್ಕೆ ದ್ರೋಹ ಮಾಡಿರುತ್ತಾರೆ. ತಿಗಳ (ವಗ್ನಿಕುಲ) ಜನಾಂಗಕ್ಕೆ ದ್ರೋಹವೆಸಗಿದ ಡಾ|| ಕೆ. ಸುಧಾಕರ್ ರವರ ವರ್ತನೆಯನ್ನು ಈ ಜನಾಂಗ ಖಂಡಿಸುವುದರ ಜೊತೆಗೆ ಅವರನ್ನು ಜನಾಂಗವು ಬೆಂಬಲಿಸುವುದಿಲ್ಲವೆಂದು ಈ ಮೂಲಕ ಘೋಷಿಸಿರುತ್ತೇವೆ.
2013 ರಿಂದ 2018 ರ ವರೆಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ರವರು ಜನಾಂಗವನ್ನು ಗುರುತಿಸಿ ಜನಾಂಗದ ಇಬ್ಬರಿಗೆ ನಿಗಮ ಮಂಡಳಿಯ ಅಧ್ಯಕ್ಷರಾಗಿ ಹಾಗೂ ಒಬ್ಬರಿಗೆ ಎಮ್.ಎಲ್.ಸಿ ಯಾಗಿ ನೇಮಿಸಿ, ಕರ್ನಾಟಕ ರಾಜ್ಯದಲ್ಲಿ ನಡೆಯುವ ಎಲ್ಲಾ ಕರಗ ಮಹೋತ್ಸವಗಳಿಗೆ 2 ಲಕ್ಷ ರೂ ಅನುದಾನವನ್ನು ನೀಡಿರುತ್ತಾರೆ ಆದರೆ ಬಿ.ಜೆ.ಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಡಾ|| ಕೆ. ಸುಧಾಕರ್ ರವರಂತಹ ನಾಯಕರ ಕುಮ್ಮಕ್ಕಿನಿಂದ ಜನಾಂಗಕ್ಕೆ ಅನ್ಯಾಯ ಮಾಡಿರುತ್ತಾರೆ.
ಇಂದು ನಾವು ಕರ್ನಾಟಕ ರಾಜ್ಯದ ತಿಗಳ (ವಹಿಕುಲ) ಜನಾಂಗವು ಡಾ| ಕೆ. ಸುಧಾಕರ್ ರವರ ವರ್ತನೆಯನ್ನು ಖಂಡಿಸುವುದರ ಜೊತೆಗೆ ಅವರನ್ನು ಈ ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲವೆಂದು ಮಾಧ್ಯಮದ ಮಿತ್ರರ ಮೂಲಕ "GO BACK SUDHAKER" ಮಾಧ್ಯಮದ ಮುಖಾಂತರ ಡಾ| ಕೆ. ಸುಧಾಕರ್ಗೆ ತಿಳಿಸುತ್ತಿದ್ದೇವೆ ಎಂದು ಡಾ|| ಮು.ಕೃಷ್ಣಮೂರ್ತಿ, ಅಧ್ಯಕ್ಷರು ಸಂಘದ ಪರವಾಗಿ ತಿಳಿಸಿದರು.
City Today News 9341997936