[New post] ರಾಷ್ಟ್ರದ ರೈತ ಮುಖಂಡರಾದ ರಾಕೇಶ್ , ಟೆಕಾಯತ್ , ಯದುವೀರ್ ಸಿಂಗ್ ಮತ್ತು ಕವಿತಾ ಕುರುಕುಂಟೆ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಖಂಡಿಸುತ್ತದೆ
City Today News (City today.media) posted: " 30-05-2022ರ ಸೋಮವಾರ ರಾಷ್ಟ್ರದ ರೈತ ಮುಖಂಡರಾದ ರಾಕೇಶ್ ಟಕಾಯತ್ , ಯದುವೀರ್ ಸಿಂಗ್ ಮತ್ತು ಕವಿತಾ ಕುರುಕುಂಟೆ ಯವರು ನಡೆಸಿದ ಪತ್ರಿಕಾಗೋಷ್ಠಿಯ ಸಂದರ್ಭದಕ್ಕೆ ಕಿಡಿಗೇಡಿಗಳು ರೈತ ಮುಖಂಡರ ಮೇಲೆ ಹಲ್ಲೆ ಮಾಡಿದಲ್ಲದೆ , ಮುಖಕ್ಕೆ ಮಸಿ ಬಳಿಯುವ ಕೆಲಸವನ್ನು ಮಾಡಿದ್ದಾರೆ ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ಹ" City Today News
30-05-2022ರ ಸೋಮವಾರ ರಾಷ್ಟ್ರದ ರೈತ ಮುಖಂಡರಾದ ರಾಕೇಶ್ ಟಕಾಯತ್ , ಯದುವೀರ್ ಸಿಂಗ್ ಮತ್ತು ಕವಿತಾ ಕುರುಕುಂಟೆ ಯವರು ನಡೆಸಿದ ಪತ್ರಿಕಾಗೋಷ್ಠಿಯ ಸಂದರ್ಭದಕ್ಕೆ ಕಿಡಿಗೇಡಿಗಳು ರೈತ ಮುಖಂಡರ ಮೇಲೆ ಹಲ್ಲೆ ಮಾಡಿದಲ್ಲದೆ , ಮುಖಕ್ಕೆ ಮಸಿ ಬಳಿಯುವ ಕೆಲಸವನ್ನು ಮಾಡಿದ್ದಾರೆ ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಖಂಡಿಸುತ್ತದೆ ರೈತ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಇರಬಹುದು ರೈತರಿಗೆ ಬಂದಿರುವ ಸಂಕಷ್ಟಗಳ ವಿರುದ್ಧ ನಾವೆಲ್ಲರೂ ಒಂದೇ ಧ್ವನಿಯಾಗಿ ಕೆಲಸ ಮಾಡಿದ್ದೇವೆ , ನಾಳೆಯ ದಿನಗಳಲ್ಲಿಯೂ ಮಾಡುತ್ತೇವೆ . ಆದರೆ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ನಾಗರಿಕರು ತನ್ನ ಹಕ್ಕೊತ್ತಾಯಕ್ಕಾಗಿ ಸರ್ಕಾರಕ್ಕೆ ಹೇಳುವ ಕೇಳುವ ಪ್ರಯತ್ನ ಮಾಡುತ್ತಾರೆ , ಆದರೆ ಕೆಲವು ಪಕ್ಷಗಳು , ನ್ಯಾಯದ ಧ್ವನಿ ಮುಚ್ಚಿಸುವ ಕೆಲಸಗಳಿಗೆ ಪುಂಡರನ್ನು ಬಳಸಿ ಬೆಂಬಲಿಸುವುದು ಸರಿಯಾದ ಕ್ರಮವಲ್ಲ . ಈಗ ನಡೆದಂತಹ ಘಟನೆಗಳು ಮುಖಂಡರುಗಳಿಗೆ ಈ ತರಹದ ಕೃತ್ಯ ನಡೆಸಲು ಅವಕಾಶ ಮಾಡಿಕೊಟ್ಟಿರುವ ರಾಜ್ಯ ಸರ್ಕಾರದ ನಡೆ ಇಡೀ ನಾಡಿನ ರೈತರಿಗೆ ಮತ್ತು ನಾಗರಿಕರಿಗೆ ಮಾಡಿದ ಅಪಮಾನವಾಗಿರುತ್ತದೆ . ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರೈತ ಮುಖಂಡರಿಗೆ ಆದಂತಹ ಘಟನೆಯ ಬಗ್ಗೆ ಕೃಷ್ಣ ನಡೆಸಿರುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ,
ಮಾಧ್ಯಮಗಳು ಇರಬೇಕು ಸಮಾಜದ ಒಳಿತಿಗೆ , ಸಮಾಜದ ಕಣ್ಣೆರೆಸಲು ಕೆಲಸ ಮಾಡುತ್ತಿರುವ ಮಾಧ್ಯಮ ಸಮೂಹಕ್ಕೆ ಯಾವುದೋ ಒಂದು ಮಾಧ್ಯಮದ ವ್ಯಕ್ತಿ ಮಾಡುವ ಅನಾಚಾರಗಳು ತಪ್ಪಾಗುತ್ತದೆ . ನಾನು ಮಾಧ್ಯಮದ ಸಂಘಟನೆಗಳಿಗೂ ಮನವಿ ಮಾಡುತ್ತೇನೆ . ಹಾಗೂ ಪಬ್ಲಿಕೇಶನ್ ಮತ್ತು ಬ್ರಾಡ್ಕಾಸ್ಟಿಂಗ್ ಭಾರತ ಸರ್ಕಾರದ ಇಲಾಖೆಯ ಮುಖ್ಯಸ್ಥರಿಗೂ ಕೂಡ ಮನವಿ ಮಾಡುತ್ತೇನೆ . ಇಂತಹ ಮಾಧ್ಯಮವನ್ನು ನಿಯಂತ್ರಿಸಬೇಕೆಂದು ಮತ್ತು ಇದು ಸಂಪೂರ್ಣವಾಗಿ ನಮ್ಮ ಮೇಲೆ ನಡೆದಿರುವಂತಹ ಎಲ್ಲಾ ಪ್ರಕರಣಗಳ ಸತ್ಯ ಶೋಧನೆಗೆ ಕರ್ನಾಟಕ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು
No comments:
Post a Comment