privacysavvy

privacysavvy

Monday, August 1, 2022

[New post] *ಭ್ರಷ್ಟ ಬಿಜೆಪಿಯನ್ನು ಬುಡ ಸಮೇತ ಕಿತ್ತು ಹಾಕುವುದೇ ಎಎಪಿ ಗುರಿ: ಬಿಬಿಎಂಪಿ ಚುನಾವಣೆಗೆ ಪ್ರಚಾರ ಸಮಿತಿ

Site logo image City Today News (City today.media) posted: " ಮುಂಬರುವ ಬಿಬಿಎಂಪಿ (ಪಾಲಿಕೆ) ಚುನಾವಣೆ ಭ್ರಷ್ಟ ಬಿಜೆಪಿ ವಿರುದ್ದ ಜನಸಾಮಾನ್ಯರು ನಡೆಸುವ ಹಣಾಹಣಿಯಾಗಲಿದೆ. ಪಕ್ಷ ಸ್ಥಾಪನೆಯ ಹತ್ತೇ ವರ್ಷದಲ್ಲಿ ದೇಶದೆಲ್ಲೆಡೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯ ಸಾಧಿಸಿದ್ದಲ್ಲದೇ, ಎರಡು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿರುವ ಅಮ್ ಆದಿ ಪಾರ್ಟಿಯು ದೇಶದಲ್ಲಿ ಅತ್ಯಂತ ವೇ" City Today News

*ಭ್ರಷ್ಟ ಬಿಜೆಪಿಯನ್ನು ಬುಡ ಸಮೇತ ಕಿತ್ತು ಹಾಕುವುದೇ ಎಎಪಿ ಗುರಿ: ಬಿಬಿಎಂಪಿ ಚುನಾವಣೆಗೆ ಪ್ರಚಾರ ಸಮಿತಿ

City Today News (City today.media)

Aug 1

ಮುಂಬರುವ ಬಿಬಿಎಂಪಿ (ಪಾಲಿಕೆ) ಚುನಾವಣೆ ಭ್ರಷ್ಟ ಬಿಜೆಪಿ ವಿರುದ್ದ ಜನಸಾಮಾನ್ಯರು ನಡೆಸುವ ಹಣಾಹಣಿಯಾಗಲಿದೆ. ಪಕ್ಷ ಸ್ಥಾಪನೆಯ ಹತ್ತೇ ವರ್ಷದಲ್ಲಿ ದೇಶದೆಲ್ಲೆಡೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯ ಸಾಧಿಸಿದ್ದಲ್ಲದೇ, ಎರಡು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿರುವ ಅಮ್ ಆದಿ ಪಾರ್ಟಿಯು ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷವಾಗಿದೆ. ನಾವು ಕೆಲಸ ಮಾಡುತ್ತಿರುವುದರಿಂದ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದೇವೆ. ದೇಶದ ಜನರು ಅರವಿಂದ್ ಕೇಜಿವಾಲ್ ಮಾದರಿ' ಅನ್ನು ಗುರುತಿಸಿದ್ದಾರೆ.

ಪಾಲಿಕೆ ಚುನಾವಣೆ ಯಾವ ಕ್ಷಣದಲ್ಲಾದರೂ ಘೋಷಣೆಯಾಗಬಹುದು. ಇದರ ನಿಮಿತ್ತ ಎಎಪಿ ಪ್ರಚಾರ ಸಮಿತಿಯೊಂದನ್ನು ರಚನೆ ಮಾಡಿದೆ, ಈ ಸಮಿತಿಯಲ್ಲಿರುವವರಿಗೆ ಬೆಂಗಳೂರು ಚೆನ್ನಾಗಿ ಗೊತ್ತಿದೆ, ನಗರದ ಜನರ ಕಷ್ಟಗಳ ಸಂಪೂರ್ಣ ಅರಿವಿದೆ. ನಗರಕ್ಕೆ ಮತ್ತು ನಾಡಿಗೆ ನೀಡಿರುವ ಸೇವೆಯಿಂದ ಜನರ ನಂಬಿಕೆ ಗಳಿಸಿದ್ದಾರೆ.
ಭಾಸ್ಕರ್ ರಾವ್ – ಸಮಿತಿ ಅಧ್ಯಕ್ಷರು

ಮುಖ್ಯಮಂತ್ರಿ ಚಂದ್ರು

ಕ ಮಥಾಯಿ

ಮೋಹನ್ ದಾಸರಿ

"ಈ ಸಮಿತಿಯು ಪಕ್ತವನ್ನು ಗೆಲ್ಲಿಸಿ ಬೆಂಗಳೂರಿನಲ್ಲಿ ಒಂದು ಜನಪರ ಮತ್ತು ಪ್ರಾಮಾಣಿಕ ಪಾಲಿಕೆಯನ್ನು ಸ್ಥಾಪಿಸುತ್ತದೆ ಎಂದು
ಪಕ್ಷಕ್ಕೆ ಸಂಪೂರ್ಣ ನಂಬಿಕೆಯಿದೆ." ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಎಪಿ ರಾಜ್ಯ ಉಪಾಧ್ಯಕ್ಷ ಮತ್ತು ಬಿಬಿಎಂಪಿ ಪ್ರಚಾರ ಸಮಿತಿ ಅಧ್ಯಕ್ಷ ಭಾಸ್ಕರ್ ರಾವ್‌ ಜನರು ಪಾವತಿಸುವ ತೆರಿಗೆ ದುಡ್ಡು ಜನರ ಉದ್ಧಾರಕ್ಕೆ ಬಳಸಬೇಕೇ ಹೊರತು ರಾಜಕಾರಣಿಗಳ ಬಟ್ಟೆಗೆ ಅಲ್ಲ ಎಂಬುದನ್ನು ನಾವು ನಂಬಿದ್ದೇವೆ. ಸುಸಜ್ಜಿತ ಶಾಲೆಗಳು, ಆಸ್ಪತ್ರೆಗಳು, ಉತ್ತಮ ರಸ್ತೆ, ನೀರು, ವಿದ್ಯುತ್‌ ಮತ್ತು ಬೆಳವಣಿಗೆಗೆ ಪೂರಕವಾದ ಅವಕಾಶಗಳು ಜನಜೀವನಕ್ಕೆ ಬೇಕಾದ್ದು ಇಷ್ಟೇ, ಇದು ಜನರ ಹಕ್ಕೂ ಕೂಡಾ ಆಪ್ ದೇಶಕ್ಕೆ ಒಂದು ಮಾದರಿಯನ್ನು ತೋರಿಸಿದೆ, ಮತ್ತು ಅದನ್ನು ಮಾಡಿ ತೋರಿಸಿದೆ, ಬೇರೆ ಪಕ್ಷಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗಿವೆ." ಎಂದರು.

ಮುಂದುವರೆದು "ಕಳೆದ ವಾರವಷ್ಟೇ ಅಭ್ಯರ್ಥಿ ಶೋಧನಾ ಸಮಿತಿ ಯನ್ನು ರಚಿಸಿ ಘೋಷಣೆ ಮಾಡಿದ್ದವು, ಮಿಸ್ ಕಾಲ್ ಮತ್ತು ಈಮೇಲ್ ಮೂಲಕ ಸಂಪರ್ಕ ಮಾಡುವ ವ್ಯವಸ್ಥೆ ಕಲ್ಪಿಸಿದ್ದೆವು, ಇದರ ಮೂಲಕ 600ಕ್ಕೂ ಹೆಚ್ಚು ಜನರು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಎಎಪಿ ಟಿಕೆಟ್ ನಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ, ವಾರ್ಡ್‌ ಮೀಸಲಾತಿ ಪ್ರಕಟಣೆಗೂ
ಮುನ್ನವೇ ಇಷ್ಟು ಅಸಕ್ತರು ಬಂದಿರುವುದು, ಮೀಸಲಾತಿ ಘೋಷಣೆಯ ನಂತರ ಇನ್ನಷ್ಟು ಆಸಕ್ತರು ಬರುವುದು ಖಚಿತವಾಗಿ ಕಾಣುತ್ತದೆ" ಎಂದು ಹೇಳಿದರು.

ಜನಸಂಪರ್ಕ ಮತ್ತು ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮಾತನಾಡಿ ಜನರು ಒಂದೆಡೆ 40% ಕಮಿಷನ್ ಸರ್ಕಾರದಿಂದ ಬೇಸತ್ತಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಆಕ್ರೋಶಗೊಂಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಪರ್ಯಾಯ ರಾಜಕಾರಣ ನೀಡುತ್ತದೆ ಎಂಬ ನಂಬಿಕೆ ಜನರಲ್ಲಿ ಉಳಿದಿಲ್ಲ. ಜನರೇ ಹೇಳುವಂತ ಈ ಭ್ರಷ್ಟ ಬಿಜೆಪಿ ಯನ್ನು ಪ್ರಶ್ನಿಸಿ ಬಯಲಿಗೆಳೆಯುವ ನೈತಿಕ ಶಕ್ತಿ ಎಎಪಿಗೆ ಮಾತ್ರ ಇದೆ" ಎಂದರು.

"ಇತ್ತೀಚೆಗೆ ಸಚಿವ ಸಿ.ಎನ್.ಅಶ್ವಥನಾರಾಯಣ ರ ಟೆಂಡರ್ ಹಗರಣದ ಬಗ್ಗೆ ಸಾಕ್ಷಿ ಸಮೇತ ಎಎಪಿ ಮಾತನಾಡಿದ್ದು, ಆದರೂ ಯಾವುದೇ ತನಿಖೆ ಆರಂಭವಾಗದ ಕಾರಣ, ಇಷ್ಟರಲ್ಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು' ಎಂದು ರಾಜ್ಯ ವಕ್ತಾರ
ಕೆ.ಮಥಾಯಿ ಹೇಳಿದರು.

ಕಳೆದ 10 ವರ್ಷಗಳಲ್ಲಿ ಹಣಬಲವಿಲ್ಲದವರು, ಜನಬಲದ ಮೇಲೆ ಚುನಾವಣೆಯಲ್ಲಿ ನಿಲ್ಲುವುದು ಮಾತ್ರವಲ್ಲದೇ, ಗೆಲ್ಲಲೂಬಹುದು ಎಂದು ಆಪ್ ತೋರಿಸಿಕೊಟ್ಟಿದೆ. ಮನೆ ಮನೆ ಪ್ರಚಾರ ಸೇರಿದಂತೆ ಇನ್ನು ಅನೇಕ ವಿಭಿನ್ನ ರೀತಿಯ ಪ್ರಚಾರಗಳು ಬೆಂಗಳೂರಿನಲ್ಲಿ ನಡೆಯಲಿದೆ. ಬೇರೆ ಪಕ್ಷಗಳು ಮಾಡುವ ಖರ್ಚಿಗೆ ಹೋಲಿಸಿದರೆ ನಮ್ಮದೂ ತೀರಾ ಕಡಿಮೆ. ಯಾಕೆಂದರೆ ನಾವು ಹಣ ಹಂಚದೇ ನಮ್ಮದೇ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಇಳಿಯುತ್ತೇವೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಕೆಲಸ ಬೆಂಗಳೂರಿನಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮತ್ತು ಪ್ರಚಾರ ಸಮಿತಿ ಸದಸ್ಯರಾದ ಲಕ್ಷ್ಮಿಕಾಂತ್ ರಾವ್ ಇದ್ದರು.

City Today Today

9341997936

Comment
Like
Tip icon image You can also reply to this email to leave a comment.

Unsubscribe to no longer receive posts from City Today News.
Change your email settings at manage subscriptions.

Trouble clicking? Copy and paste this URL into your browser:
http://citytoday.media/2022/08/01/%e0%b2%ad%e0%b3%8d%e0%b2%b0%e0%b2%b7%e0%b3%8d%e0%b2%9f-%e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf%e0%b2%af%e0%b2%a8%e0%b3%8d%e0%b2%a8%e0%b3%81-%e0%b2%ac%e0%b3%81%e0%b2%a1-%e0%b2%b8/

Powered by WordPress.com
Download on the App Store Get it on Google Play
at August 01, 2022
Email ThisBlogThis!Share to XShare to FacebookShare to Pinterest

No comments:

Post a Comment

Newer Post Older Post Home
Subscribe to: Post Comments (Atom)

End of week Artemis update - July 4th 2025

A round-up of our ILS focused news from this week ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌...

  • [New post] Norwegian Black Metal Bands – Satanic or Psychotic?
    Dawn ...
  • [New post] After Announcing a New CEO, is Lordstown Motors Worth Buying?
    Editorial Team posted: "To improve its market reputation and streamline its operations, on Aug. 26 electric vehicle (EV) ma...
  • [New post] Estrazioni Lotto di oggi martedì 30 novembre 2021
    Redazione News posted: "Seguite su Cyberludus.com la diretta delle estrazioni di Lotto, 10eLotto e Superenalotto di martedì...

Search This Blog

  • Home

About Me

privacysavvy
View my complete profile

Report Abuse

Blog Archive

  • July 2025 (14)
  • June 2025 (78)
  • May 2025 (95)
  • April 2025 (85)
  • March 2025 (78)
  • February 2025 (31)
  • January 2025 (50)
  • December 2024 (39)
  • November 2024 (42)
  • October 2024 (54)
  • September 2024 (83)
  • August 2024 (2665)
  • July 2024 (3210)
  • June 2024 (2908)
  • May 2024 (3025)
  • April 2024 (3132)
  • March 2024 (3115)
  • February 2024 (2893)
  • January 2024 (3169)
  • December 2023 (3031)
  • November 2023 (3021)
  • October 2023 (2352)
  • September 2023 (1900)
  • August 2023 (2009)
  • July 2023 (1878)
  • June 2023 (1594)
  • May 2023 (1716)
  • April 2023 (1657)
  • March 2023 (1737)
  • February 2023 (1597)
  • January 2023 (1574)
  • December 2022 (1543)
  • November 2022 (1684)
  • October 2022 (1617)
  • September 2022 (1310)
  • August 2022 (1676)
  • July 2022 (1375)
  • June 2022 (1458)
  • May 2022 (1297)
  • April 2022 (1464)
  • March 2022 (1491)
  • February 2022 (1249)
  • January 2022 (1282)
  • December 2021 (1663)
  • November 2021 (3139)
  • October 2021 (3253)
  • September 2021 (3136)
  • August 2021 (732)
Powered by Blogger.