ದಕ್ಷಿಣ ವಿಭಾಗ, ಜಯನಗರ ಉಪ ವಿಭಾಗ, ಬನಶಂಕರಿ ಪೊಲೀಸ್ ಠಾಣೆ  
 ಮನೆಗಳ ಮುಂಭಾಗ ಬೀಗ ಹಾಕಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ, ಸುಮಾರು ರೂ.7,50,000/- ಮೌಲ್ಯದ 12 ದ್ವಿಚಕ್ರ ವಾಹನ ವಶ.
  ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ದಾಖಲಾದ ಕಾರಣ, ತನಿಖೆಯನ್ನು ಕೈಗೊಂಡ ಬನಶಂಕರಿ ಪೊಲೀಸರು, ಒಬ್ಬ ಕುಖ್ಯಾತ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಅರೋಪಿಯನ್ನು ದಸ್ತಗಿರಿ ಮಾಡಿ, ಆತನು ನೀಡಿದ ಮಾಹಿತಿ ಮೇರೆಗೆ ಸುಮಾರು ರೂ.7,50,000/- ಮೌಲ್ಯದ ವಿವಿಧ ಮಾದರಿಯ ಒಟ್ಟು 12 ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
 ಸದರಿ ಆರೋಪಿಯ ಪತ್ತೆಯಿಂದ ಬನಶಂಕರಿ ಪೊಲೀಸ್ ಠಾಣೆಯ 05, ಸುದ್ದಗುಂಟೆ ಪಾಳ್ಯ, ಹನುಮಂತನಗರ ಪೊಲೀಸ್ ಠಾಣೆಗಳ ತಲಾ 02, ಹಾಗೂ ಕುಮಾರಸ್ವಾಮಿ ಲೇಔಟ್, ಬಸವನಗುಡಿ, ತಲಘಟ್ಟಪುರ ಪೊಲೀಸ್ ಠಾಣೆಯ ತಲಾ 01 ಪ್ರಕರಣ ಸೇರಿ ಒಟ್ಟು 12 ಪ್ರಕರಣಗಳು ಪತ್ತೆಯಾಗಿರುತ್ತವೆ. ಸದರಿ ಆರೋಪಿಯ ಮೇಲೆ ಈಗಾಗಲೇ ಬೆಂಗಳೂರು ನಗರದ ಜೆ.ಪಿ.ನಗರ, ಕೋಣನಕುಂಟೆ, ಕುಮಾರಸ್ವಾಮಿ ಲೇಔಟ್ ಮತ್ತು ಇತರೆ ಪೊಲೀಸ್ ಠಾಣೆಗಳಲ್ಲಿ ಸುಮಾರು 15 ಕ್ಕೂ ಹೆಚ್ಚು ಪ್ರಕರಣಗಳು ಇರುತ್ತವೆ.
  ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಪಿ.ಕೃಷ್ಣಕಾಂತ್, ಮತ್ತು ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ವಿ.ನಾರಾಯಣಸ್ವಾಮಿ ರವರ ಮಾರ್ಗದರ್ಶನದಲ್ಲಿ ಬನಶಂಕರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಗಿರೀಶ್ ಸಿ ನಾಯ್ಕ ರವರ ನೇತೃತ್ವದ ಸಿಬ್ಬಂದಿಯವರ ತಂಡ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
 ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.
  City Today News 9341997936
   							  		
No comments:
Post a Comment