ಬೆಂಗಳೂರಿನ ಕಿಂಡರ್ ಆಸ್ಪತ್ರೆ, ಆಪರೇಷನ್ ಸ್ಟೈಲ್ ಮತ್ತು ಇಂಗಾ ಹೆಲ್ತ್ ಫೌಂಡೇಶನ್‌ನ ಸಹಭಾಗಿತ್ವವು ಸೀಳು ತುಟಿ ಹೊಂದಿರುವ ಮಕ್ಕಳ ಮುಖದಲ್ಲಿ ಹೊಸ ಮಂದಹಾಸ ಮೂಡಿಸಿವೆ. "ದಿ ಪ್ಯೂಚರ್ ಆಫ್ ಸ್ಟೈಲ್ಸ್ ಮಿಷನ್" ಕರ್ನಾಟಕದಲ್ಲಿ ಸೀಳು ತುಟಿಯಿಂದ ಬಳಲುತ್ತಿರುವ ಮಕ್ಕಳಿಗೆ ಸಹಾಯ ಮಾಡುವ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮೂಲಕ ಸಾಮಾಜಿಕ ಕಳಕಳಿ ಮೆರೆಯಲು ಮುಂದಾಗಿದೆ. ಈ ಕುರಿತಂತೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ರಂಜಿತ್ ಕೃಷ್ಣನ್ (ಕಿಂಡರ್ ಗ್ರೂಪ್ ಸಿಇಒ, ಭಾರತ) ಮಾತನಾಡಿ, "ಒಟ್ಟು 140 ಮಕ್ಕಳಲ್ಲಿ ಅಕ್ಟೋಬರ್ 8 ರಿಂದ ಅಕ್ಟೋಬರ್ 15, 2023 ರವರೆಗೆ ನಡೆಯಲಿರುವ ಈ ಮಿಷನ್ ನಲ್ಲಿ, 65-75 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಸೀಳು ತುಟಿ ಶಸ್ತ್ರ ಚಿಕಿತ್ಸೆ ನಡೆಸಲಿದ್ದೇವೆ. ಆರ್ಥಿಕವಾಗಿ ದುರ್ಬಲವಾಗಿರುವ ಮಕ್ಕಳಿಗೆ ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ' ಎಂದರು. ಅಭಿಷೇಕ್ ಸೆನ್ ಗುಪ್ತ (ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಆಪರೇಷನ್ ಸ್ಟೈಲ್ ನ ಮ್ಯಾನ್ಮಾರ್, ಇಟಲಿ ಮತ್ತು ರಷ್ಯಾ ಪ್ರಾದೇಶಿಕ ನಿರ್ದೇಶಕರು) ಮಾತನಾಡಿ "ಈ ಸಹಯೋಗದ ಪುಯತ್ನವು ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ಶಿಶುವೈದ್ಯರು, ದಾದಿಯರು, ವಾಕ್ ಚಿಕಿತ್ಸಕರು ಸೇರಿದಂತೆ ಭಾರತದಾದ್ಯಂತದ ವೈದ್ಯಕೀಯ ಮತ್ತು ವೈದ್ಯಕೀಯೇತರ ಸ್ವಯಂಸೇವಕರ ತಂಡವನ್ನು ಒಳಗೊಂಡಿರುತ್ತದೆ" ಎಂದು ಹೇಳಿದರು.

ಡಾ. ಕೃಷ್ಣ ಸಮ ರಾವ್ (ಸಂಸ್ಥಾಪಕ ಮತ್ತು ಟ್ರಸ್ಟ್, ಇಂಗಾ ಹೆಲ್ತ್ ಫೌಂಡೇಶನ್ ಮತ್ತು ಆಪರೇಷನ್ ಸ್ಟೈಲ್ ಕ್ಲಸ್ಟ್ ಸರ್ಜರಿ ಟೀಮ್ ಲೀಡರ್) "ಈ ಮಿಷನ್ ಆಪರೇಷನ್ ಸ್ಟೈಲ್, ಇಂಗಾ ಹೆಲ್ತ್ ಫೌಂಡೇಶನ್ (IHF), ಕರ್ನಾಟಕ ಸರ್ಕಾರ, NHM, RBSK ನಡುವಿನ ದೀರ್ಘಕಾಲದ ಪಾಲುದಾರಿಕೆಯಿಂದ ನಡೆಯಲಿದೆ. 2019 ರಲ್ಲಿ ಬೆಂಗಳೂರಿನಲ್ಲಿ ಮೊದಲ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರದೊಂದಿಗೆ ಪ್ರಾರಂಭವಾಯಿತು. ಆಪರೇಷನ್ ಸ್ಟೈಲ್ ಮತ್ತು IHF ಎರಡು ವರ್ಷಳಿಂದ ಸೀಳು ತುಟಿ ಆರೈಕ ಕೇಂದ್ರಗಳನ್ನು ನಡೆಸುತ್ತಿದೆ. ಕರ್ನಾಟಕದ ವಿವಿಧ ಭಾಗಗಳಿಂದ ವಾರ್ಷಿಕ 500 ಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮತ್ತು ಸಮಗ್ರ ಆರೈಕೆಯನ್ನು ಒದಗಿಸುತ್ತದೆ. ಸರಿಸುಮಾರು 2500 ರೋಗಿಗಳ ಜೀವನವನ್ನು ಬದಲಾಯಿಸಿದ ಮತ್ತು ಸುಮಾರು 35,000 ಸೀಳು ತುಟಿ ಹೊಂದಿರುವ ವ್ಯಕ್ತಿಗಳಿಗೆ ಸಮಗ್ರ ಚಿಕಿತ್ಸೆ ನೀಡಿದೆ. ಈ ಸಾಧನೆಯು ಆಪರೇಷನ್ ಸ್ಟೈಲ್, IHF, ವೈದ್ಯಕೀಯ ಮತ್ತು ವೈದ್ಯಕೀಯೇತರ ತಂಡಗಳ ಪ್ರಯತ್ನಗಳಿಂದ ಸಾಧ್ಯವಾಗಿದೆ. RBSK ತಂಡವು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇರುವ ರೋಗಿಗಳನ್ನು ಗುರುತಿಸಲು ಕೆಲಸ ಮಾಡಿದೆ' ಎಂದರು.

ಹುಟ್ಟುವಾಗಲೇ ಸೀಳು ತುಟಿ ಹೊಂದಿರುವ ಮಕ್ಕಳು ಸಾಮಾಜಿಕವಾಗಿ ಮುಜುಗರವನ್ನು ಅನುಭವಿಸುತ್ತಾರೆ. ಕೆಲವರಿಗೆ ಇದರಿಂದ ಶಿಕ್ಷಣಿಕ ಹಿನ್ನಡೆಯೂ ಆಗಿರುತ್ತದೆ. ಒಂದು ಸರಳವಾದ ಶಸ್ತ್ರಚಿಕಿತ್ಸೆಯು ಮುಜುಗರವನ್ನು ತಪ್ಪಿಸಿ ಮಕ್ಕಳನ್ನು ಸಮಾಜದ ಜೊತೆ ಬೆರೆಯಲು ನೆರವಾಗಲಿದೆ. ಕಿಂಡರ್ ಆಸ್ಪತ್ರೆ, ಆಪರೇಷನ್ ಸ್ಟೈಲ್ ಮತ್ತು ಇಂಗಾ ಹೆಲ್ತ್ ಫೌಂಡೇಶನ್ ಕರ್ನಾಟಕದ ಮೂಲೆಮೂಲೆಯಲ್ಲಿರುವ ಇಂತಹ ಮಕ್ಕಳಿಗೆ ಸಹಾಯ ಹಸ್ತ ಚಾಚಿದ.
ಕಾರ್ಯಕ್ರಮಕ್ಕೆ ಮಾಗಡಿ ರಸ್ತೆಯ ಶ್ರೀ ವಿನಾಯಕ ನರ್ಸಿಂಗ್ ಕಾಲೇಜಿನ ಸ್ವಯಂಸೇವಕರು ಬೆಂಬಲ ನೀಡಲಿದ್ದಾರೆ.
City Today New 9341997936
No comments:
Post a Comment