[New post] ಈಡಿಗ ಹಾಗೂ 26 ಪಂಗಡಗಳ ಸಮುದಾಯಕ್ಕೆ ನ್ಯಾಯವನ್ನು ಒದಗಿಸಬೇಕೆಂದು ವಿನಂತಿ
City Today News (City today.media) posted: " ಕರ್ನಾಟಕ ರಾಜ್ಯದ ಈಡಿಗ ಹಾಗೂ 26 ಸಮುದಾಯ ಪಂಗಡಗಳ ಬೇಡಿಕೆಯನ್ನು ಈಡೇರಿಸುವ ಕುರಿತು . ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ಕರ್ನಾಟಕ ರಾಜ್ಯದಲ್ಲಿ ಈಡಿಗ , ಬಿಲ್ಲವ , ನಾಮದಾರಿ , ನಾಯ್ಕ , ದೀವರ ಈ ರೀತಿಯ ಜಾತಿಗಳು ಸೇರಿದಂತೆ 26 ಪಂಗಡಗಳು ಸೇರಿಕೊಂಡು 70 ಲಕ್ಷ ಜನ ಸಂಖ್ಯೆಗೂ ಹೆಚ್ಚ ಸಮುದಾಯಗಳು " City Today News
ಕರ್ನಾಟಕ ರಾಜ್ಯದ ಈಡಿಗ ಹಾಗೂ 26 ಸಮುದಾಯ ಪಂಗಡಗಳ ಬೇಡಿಕೆಯನ್ನು ಈಡೇರಿಸುವ ಕುರಿತು .
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ಕರ್ನಾಟಕ ರಾಜ್ಯದಲ್ಲಿ ಈಡಿಗ , ಬಿಲ್ಲವ , ನಾಮದಾರಿ , ನಾಯ್ಕ , ದೀವರ ಈ ರೀತಿಯ ಜಾತಿಗಳು ಸೇರಿದಂತೆ 26 ಪಂಗಡಗಳು ಸೇರಿಕೊಂಡು 70 ಲಕ್ಷ ಜನ ಸಂಖ್ಯೆಗೂ ಹೆಚ್ಚ ಸಮುದಾಯಗಳು ಇರುತ್ತದೆ . ಈಗ ಆಡಳಿತ ಪಕ್ಷದಲ್ಲಿ 7 ಜನ ಶಾಸಕರು ಹಾಗೂ ಇಬ್ಬರು ಮಂತ್ರಿಗಳು ಕೂಡ ಆಗಿರುತ್ತಾರೆ . ಆದರೆ , ಈ ಸಮುದಾಯಕ್ಕೆ ಇಲ್ಲಿಯವರೆಗೆ ಸೂಕ್ತ ನ್ಯಾಯ ಸಿಕ್ಕಿರುವುದಿಲ್ಲ . ನಮ್ಮ ಈಡಿಗ ಸಮುದಾಯದ ಕುಲಕಸುಬಾದ ಸೇಂದಿ ನಿಲ್ಲಿಸಿ ಈಗಾಗಲೇ 18 ವರ್ಷಗಳಾಗಿವೆ . ನಮ್ಮ ಸಮುದಾಯದ ಕುಲಕಸುಬು ಮರಳಿ ಬರುವುದಕ್ಕೋಸ್ಕರ ಈಡಿಗ ಸಮುದಾಯದ ಗುರುಗಳಾದ ಪರಮ ಪೂಜ್ಯ ಡಾ || ಪ್ರಣವನಂದ ಸ್ವಾಮಿಗಳ ನೇತೃತ್ವದಲ್ಲಿ ಕಳೆದ ತಿಂಗಳು 5 ನೇ ತಾರೀಖಿನಿಂದ 11 ನೇ ತಾರೀಖಿನವರೆಗೂ 7 ದಿನಗಳ ಕಾಲ 178 ಕಿ.ಮೀ.ವರೆಗೂ ಚಿಂಚೋಳಿಯಿಂದ ಪ್ರಾರಂಭಿಸಿ ಕಲಬುರುಗಿ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪಾದಯಾತ್ರೆ ಮಾಡಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು . ಈ ಒಂದು ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಸೇರಿರುತ್ತಾರೆ . ಹಾಗೂ ನಮ್ಮ ಬೇಡಿಕೆ ಈಡೇರುವವರೆಗೂ ಶ್ರೀಗಳ ನೇತೃತ್ವದಲ್ಲಿ ಬೃಹತ್ ಸಮಾವೇಶ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದಿನ ತಿಂಗಳುಗಳಲ್ಲಿ ಕೈಗೊಳ್ಳಲು ನಿರ್ಣಹಿಸಲಾಗಿದೆ . ಇದು ಸಮುದಾಯದ ಪ್ರಾರಂಭಿಕ ಹೋರಾಟವಾಗಿದೆ . ಹಾಗಾಗಿ ಇದೆಲ್ಲವನ್ನು ಗಮನಿಸಿ ಸರ್ಕಾರ ಕೂಡಲೇ ಕುಲಕಸುಬು ಮತ್ತು ಸಮುದಾಯದ ಅಭಿವೃದ್ಧಿ ನಿಗಮ ಘೋಷಣೆ ಮಾಡಬೇಕೆಂದು ಹಾಗೂ ಈ ಸಮುದಾಯ ಸಾಕಷ್ಟು ಸಂಕಷ್ಟ ಹಾಗೂ ನೋವಿನ ಪರಿಸ್ಥಿತಿಯಲ್ಲಿದೆ . ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬೇಡಿಕೆಗಳನ್ನು ತಮ್ಮ ಸರ್ಕಾರದ ಮೂಲಕ ಈಡೇರಿಸಿ ನಮ್ಮ ಈಡಿಗ ಹಾಗೂ 26 ಪಂಗಡಗಳ ಸಮುದಾಯಕ್ಕೆ ನ್ಯಾಯವನ್ನು ಒದಗಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಡಾ || ಶ್ರೀಶ್ರೀಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು
No comments:
Post a Comment